Description
ಆರ್ ಎಸ್ ಎಸ್ ಅಂತರಂಗ- ಎ.ಕೆ. ಸುಬ್ಬಯ್ಯ
₹80.00
ಆರ್ ಎಸ್ ಎಸ್ ಅಂತರಂಗ- ಎ.ಕೆ. ಸುಬ್ಬಯ್ಯ
ಭಾರತದ ಸಾಂಪ್ರದಾಯಕ ಹೊಲೆವಂಚನೆಯ ಚಿಂತನೆ ಮತ್ತು ಮೌಡ್ಯದ ವಿನಾಶಕಾರೀ ಆಚರಣೆಗಳು ಈ ಸಮಾಜದ ಅವನತಿಯ ವೇಗವನ್ನು ತೀವ್ರಗೊಳಿಸುತ್ತಲೇ ಬಂದಿರುವ ದುರಂತವನ್ನು ನಾವೆಲ್ಲ ಚೆನ್ನಾಗಿ ಬಲ್ಲೆವು. ತನ್ನ ಸುತ್ತಲ ಆವರಣದ ಅಸಹ್ಯಗಳನ್ನು ಯಾವತ್ತೂ ಸಹಿಸದ ಸುಬ್ಬಯ್ಯನವರು ಒಂದು ಕಾಲಕ್ಕೆ ಕರ್ನಾಟಕದ ರಾಜಕಾರಣದ ಹಲವು ಹತ್ತು ಭ್ರಷ್ಟಚಾರ ಪ್ರಕರಣಗಳನ್ನು ಸತತವಾಗಿ ಬಯಲು ಮಾಡಿ, ನಾಡಿನ ಸಂವೇದನಾಶೀಲರೆಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದವರು. ಜನಸಮುದಾಯದ ಹಿತಕ್ಕೆ ಮಾರಕವಾದುದ್ದನ್ನು ತತ್ಕ್ಷಣದಲ್ಲೇ ಧಿಕ್ಕರಿಸಿ ಹೊರನೂಕುವ ಇವರ “ಆರ್ ಎಸ್ ಎಸ್ ಅಂತರಂಗ” ಬರವಣಿಗೆಯು ಸತ್ಯನಿಷ್ಠ ಸುಬ್ಬಯ್ಯನವರ ಪ್ರಾಮಾಣಿಕತೆಗೆ ಸ್ಪಷ್ಟವಾದ ಸಾಕ್ಷಿಯಾಗಿದೆ.
1988ರಲ್ಲಿ ಮೊದಲ ಮುದ್ರಣ ಕಂಡು ಮತ್ತೆ 1990ರಲ್ಲಿ ಮರುಮುದ್ರಣಗೊಂಡ ಈ ಉಪಯುಕ್ತ ಗ್ರಂಥಕ್ಕಾಗಿ ಸಂವೇದನಾಶೀಲ ಕನ್ನಡಿಗರು ಅಲ್ಲಲ್ಲಿ ಸತತವಾಗಿ ಹಾತೊರೆಯುತ್ತಾ ಪ್ರತಿಗಳಿಗಾಗಿ ಹುಡುಕಾಡುತ್ತಿದ್ದರು. ಭಾರತದ ರಾಜಕಾರಣವು ಮತ್ತೊಂದು ಐತಿಹಾಸಿಕ ಹೊಸತಿರುವನ್ನು ಕಾಣುವ ಸಕಲ ಸಾಧ್ಯತೆಗಳಿರುವ ಈ ಕಾಲಘಟ್ಟದಲ್ಲಿ ಮೂರನೆಯ ಮುದ್ರಣವನ್ನು ಸಿದ್ಧಪಡಿಸಿದ್ದೇವೆ.
Reviews
There are no reviews yet.