Description
ಕೊರಗರು ತುಳುನಾಡಿನ ಮಾತೃ ಸಮುದಾಯ – ನವೀನ್ ಸೂರಿಂಜೆ
₹120.00
ಕೊರಗ ಸಮುದಾಯವನ್ನು ಮೂಲೆಗೆ ತಳ್ಳಿ ಅಮಾನುಷವಾಗಿ ಸಾವಿರಾರು ವರ್ಷಗಳ ಕಾಲ ಹಿಂಸಿಸಿ ಶೋಷಿಸಿದ ಮತ್ತು ಈಗಲೂ ಮುಂದುವರಿಯುತ್ತಿರುವ ಶೋಷಣೆಗೆ ಯಾರು ಕಾರಣರು ಎಂಬುದನ್ನು ಗುರುತಿಸುವ ಮತ್ತು ಹೊಣೆಗಾರರನ್ನಾಗಿ ಮಾಡುವ ನಿರ್ಣಾಯಕ ಘಟ್ಟದ ಘಟ್ಟವನ್ನು ತಲುಪಲು ಈ ಕೃತಿ ಸಹಕಾರಿಯಾಗಲಿದೆ. ಈ ಪ್ರಶ್ನೆಯ ಮೇಲೆ ಅಥವಾ ಕೊರಗ ಸಮುದಾಯದ ತಮ್ಮ ಅಸ್ಮಿತೆ ಮತ್ತು ಚಾರಿತ್ರಿಕ ಪಾತ್ರವನ್ನು ಒಪ್ಪದ ಸಾಮಾಜಿಕ ವ್ಯವಸ್ಥೆಗೆ ಗಂಭೀರ ನೆಲೆಯ ವೈಚಾರಿಕ ಮಧ್ಯಪ್ರವೇಶ ಅಗತ್ಯವಿದೆ. ಅಂತಹ ಸವಾಲುಗಳಿಗೆ ಈ ಕೃತಿ ಒಂದು ಪ್ರವೇಶಿಕೆಯಾಗಿದೆ. ನಂಬಿಕೆ ಮತ್ತು ವಾಸ್ತವತೆಗಳ ಹಿನ್ನಲೆಯಲ್ಲಿ ಕೊರಗ ಸಮುದಾಯದ ಪ್ರಾಕ್ತನ ಇತಿಹಾಸ, ಚಾರಿತ್ರಿಕ ಧಮನಕ್ಕೆ ಒಳಪಡಿಸಿದ ಕಥಾನಕಗಳನ್ನು ಪುನರ್ ನಿರೂಪಿಸಲು ಅವಕಾಶಗಳನ್ನು ಈ ಕೃತಿಯ ಮೂಲಕ ಉಜ್ವಲಗೊಳಿಸಿದ ಪತ್ರಕರ್ತ ಮತ್ತು ಸಾಮಾಜಿಕ ಸಮಾನತೆಯ ಪ್ರತಿಪಾದಕ ಹೋರಾಟಗಾರರಾದ ನವೀನ್ ಸೂರಿಂಜೆಯವರು ಅಭಿನಂದನಾರ್ಹರು.
Reviews
There are no reviews yet.