ಕ್ವಿಟ್ ಇಂಡಿಯಾ – ಚಳುವಳಿಯ ಒಳಗುಟ್ಟುಗಳು

140.00

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಿರ್ಣಾಯಕ ಎನ್ನಬಹುದಾದ ಕ್ವಿಟ್ ಇಂಡಿಯಾ ಚಳುವಳಿಗೆ ಅದರದ್ದೇ ಆದ ರಾಜಕೀಯ ಆಯಾಮಗಳಿವೆ. ಆ ಆಯಾಮಗಳ ಇತಿಹಾಸವನ್ನು ಯಡೂರು ಮಹಾಬಲ ಅವರು ಅಚ್ಚುಕಟ್ಟಾದ ಶ್ರಮದಿಂದ ಸಂಶೋಧನಾತ್ಮಕವಾಗಿ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಒಂದು ಪರ್ಯಾಯ ಮಾಪನ ಕ್ರಮದ ಮೂಲಕ ಗಾಂಧೀಜಿಯವರನ್ನೂ ಇಲ್ಲಿ ವಿಮರ್ಶೆಗೆ ಒಡ್ಡಿರುವ ರಚನೆಕಾರರು ಇಡೀ ಇತಿಹಾಸವನ್ನು ಆರಾಧನಾ ಭಾವ ಪಕ್ಕಕ್ಕಿಟ್ಟು ವಸ್ತುನಿಷ್ಠವಾಗಿ ನೋಡಿರೆಂದು ತಮ್ಮ ನಿರೂಪಣಾ ಶೈಲಿಯ ಮೂಲಕ ಕರೆಕೊಟ್ಟಿದ್ದಾರೆ. ಯಾರನ್ನೂ ಟೀಕಿಸದೆ, ವ್ಯಂಗ್ಯವಾಡದೆ, ಸನ್ನಿವೇಶಗಳನ್ನು ಚಾರಿತ್ರಿಕ ಪುರಾವೆಗಳ ತಕ್ಕಡಿಯಲ್ಲಿಟ್ಟು ಆಗಿಹೋದ ಕಾಲಘಟ್ಟವನ್ನು ವಿಮರ್ಶಿಸುತ್ತಾ ಸಾಗುವ ಕೃತಿ ಸ್ವಾತಂತ್ರಪೂರ್ವ ಭಾರತದ ಇತಿಹಾಸದ ಇನ್ನೊಂದು ಆಯಾಮವನ್ನು ಪರಿಚಯಿಸುತ್ತದೆ.