ಗಾಳಿಗೆ ಸಿಕ್ಕ ತರಗೆಲೆ

150.00

ಎಚ್.ಎಸ್.ದೊರೆಸ್ವಾಮಿಯವರು ನಮ್ಮ ನಡುವಿನ ನಡೆದಾಡುವ ಚರಿತ್ರೆ. ಸ್ವಾತಂತ್ರಪೂರ್ವ ಕಾಲಘಟ್ಟದಿಂದ ಸ್ವಾತಂತ್ರೋತ್ತರ ಭಾರತದ ಬೆಳವಣಿಗೆ, ರಾಜಕೀಯ ವಿದ್ಯಮಾನಗಳು, ಜನಸಮುದಾಯಗಳ ಪಲ್ಲಟವನ್ನು ಕಣ್ಣಾರೆ ಕಂಡಿರುವ ಅವರು ನೂರು ವರ್ಷಗಳ ನಂತರವೂ ಗಾಂಧಿವಾದದ ಜೀವಂತ ಸಾಕ್ಷಿಯಾಗಿ ನಮ್ಮನ್ನು ಸದಾ ಎಚ್ಚರಿಸುತ್ತಿರುವಂತವರು. ಈ ಇಳಿವಯಸ್ಸಿನಲ್ಲೂ ಜನಪರ ಹೋರಾಟಗಳ ಮುಂಚೂಣಿ ವಹಿಸುತ್ತಿರುವ ಅವರ ಖಾಸಗಿ ಜೀವನದ ನೆನಪುಗಳನ್ನು, ಚರಿತ್ರೆಯ ವಸ್ತುನಿಷ್ಠ ಒಳನೋಟಗಳನ್ನು ಬಿ.ಆರ್.ರಮೇಶ್ ಈ ಕೃತಿಯಲ್ಲಿ ದಾಖಲಿಸಿದ್ದಾರೆ.