ಗೌರಿ ಹೂವು – ಗೌರಿ ಲಂಕೇಶ್ ಬದುಕು ಬರಹ

290.00

ಕುಮಾರ್ ಬುರಡೀಕಟ್ಟಿ ಸಂಗ್ರಹಿಸಿ, ಸಂಪಾದಿಸಿರುವ  ಕೃತಿಯಲ್ಲಿ ಗೌರಿ ಲಂಕೇಶರ ಬರಹಗಳ ಜೊತೆಗೆ, ಗೌರಿಯವರ ಬಗ್ಗೆ ಅವರ ಆಪ್ತ ಒಡನಾಡಿಗಳು ಹಂಚಿಕೊಂಡ ನೆನಪುಗಳಿವೆ. ದನಿ ಎತ್ತುವುದು ಅನಿವಾರ್ಯವೆಂದು ಭಾವಿಸಿದ ಒಬ್ಬ ಹೋರಾಟಗಾರ್ತಿ-ಪ್ರಜೆಯ ವಿಶಾಲವಾದ ಕಾಳಜಿಗಳನ್ನು ಈ ಬರಹಗಳು ಬಿಂಬಿಸುತ್ತವೆ. ಇಂಗ್ಲಿಷ್ ಪತ್ರಕರ್ತೆಯಾಗಿ ಸಂಡೆ ಪತ್ರಿಕೆಗೆ ಅವರು ಬರೆದಿದ್ದ ಲೇಖನಗಳು, ತಮ್ಮದೇ ಸಂಪಾದಕತ್ವದ ಗೌರಿ ಲಂಕೇಶ್ ಪತ್ರಿಕೆಯಲ್ಲಿ ಬರೆದ `ಕಂಡಹಾಗೆ’ ಅಂಕಣದ ಬರಹಗಳು, ಗೌರಿಯವರು ನಡೆಸಿದ್ದ ಸಂದರ್ಶನಗಳು ಇಡಿಯಾಗಿ ಗೌರಿಯ ಬಹುಆಯಾಮದ ವ್ಯಕ್ತಿತ್ವವನ್ನು ಓದುಗರಿಗೆ ಕಟ್ಟಿಕೊಡುತ್ತವೆ.