Description
ಚನ್ನರಾಯಪಟ್ಟಣ ಭೂ ಹೋರಾಟ ಅನುಭವನಗಳ ಕಥನ- ಸಾವಿರಾರು ನದಿಗಳು
ಸುಮಾರು ಮೂರೂವರೆ ವರ್ಷಗಳಿಂದ ಉಸಿರು ಬಿಗಿಹಿಡಿದು ಕಾಯುತ್ತಿದ್ದ ದೇವನಹಳ್ಳಿ ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ಸರ್ಕಾರ ಕೃಷಿ ಭೂಮಿಯ ಭೂಸ್ವಾಧೀನವನ್ನು ಕೈಬಿಡುವ ಘೋಷಣೆ ಮಾಡಿದೆ. ಆದರೆ, ಈ 1198 ದಿನಗಳ ಸುದೀರ್ಘ ಹೋರಾಟದ ದಾರಿ ಸುಲಭವಾಗಿರಲಿಲ್ಲ. ಹೆಜ್ಜೆ ಹೆಜ್ಜೆಗೂ ಎದುರಾದ ತಿರುವುಗಳು, ಸರ್ಕಾರಗಳ ನಿರ್ಲಕ್ಷ್ಯ, ಕುತಂತ್ರಗಳು, ವಿರೋಧಿಗಳ ಬೆದರಿಕೆಗಳು – ಇವೆಲ್ಲವನ್ನೂ ಮೀರಿ ಕೊನೆಗೂ ನ್ಯಾಯ ಗೆದ್ದಿದೆ, ಜನರು ಗೆದ್ದಿದ್ದಾರೆ, ಜನಚಳುವಳಿಗಳು ಗೆದ್ದಿವೆ! ಇದರ ಹಿಂದೆ ರಾಜ್ಯದ, ದೇಶದ ಅದೆಷ್ಟೋ ಮನಸ್ಸುಗಳು ತೆರೆಯ ಹಿಂದೆ ಮತ್ತು ಮುಂದೆ ಕೆಲಸ ಮಾಡಿವೆ. ಅವರ ಈ ಬೆಂಬಲವನ್ನು ಎಂದೂ ಮರೆಯಲಾಗುವುದಿಲ್ಲ.
ಹೋರಾಟದ ಕೊನೆಯ ದಿನಗಳಲ್ಲಿ ರಾಜ್ಯದ ಜನತೆ ಸ್ಪಂದಿಸಿದ ರೀತಿ ನಿಜಕ್ಕೂ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸಿದೆ. ದೇವನಹಳ್ಳಿ ಚಲೋಗೆ ಹರಿದುಬಂದ ಜನಬೆಂಬಲ, ನಾಗರಿಕ ಸಮಾಜದಲ್ಲಿ ಇನ್ನೂ ಕೂಡಾ ತಾಯ್ತನದ ಪ್ರೀತಿ ಉಳಿದಿದೆ ಎಂಬುದಕ್ಕೆ ಬಹುದೊಡ್ಡ ನಿದರ್ಶನ. ದೇವನಹಳ್ಳಿ ಚಲೋದ ನಂತರ, ಸರ್ಕಾರವು ರೈತರೊಂದಿಗೆ ಮತ್ತು ಹೋರಾಟಗಾರರೊಂದಿಗೆ ಅತ್ಯಂತ ದಾರುಣವಾಗಿ ವರ್ತಿಸಿದಾಗ, ಇಡೀ ರಾಜ್ಯವೇ “ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ರೈತರ ಬೆನ್ನಿಗೆ ನಿಂತು ಭೂಮಿ ತಾಯಿಯ ಕರುಳಬಳ್ಳಿಯ ಸಂಬಂಧದಲ್ಲಿ ಬೆಸೆದ ಎಲ್ಲಾ ರೈತ, ಕಾರ್ಮಿಕ, ದಲಿತ, ಮಹಿಳಾ ಸಂಘಟನೆಗಳು ಸೇರಿದಂತೆ ಎಲ್ಲಾ ಜನಪರ ಸಂಘಟನೆಗಳು, ಪ್ರಗತಿಪರ ಚಿಂತಕರು, ಸಾಹಿತಿಗಳು, ಕಲಾವಿದರು, ಮಠಾಧೀಶರು, ಪ್ರಜ್ಞಾವಂತ ನಾಗರಿಕರು ಒಟ್ಟಾಗಿ ಬಂದು, ರೈತರ ಉಳಿವಿಗಾಗಿ ಜೊತೆ ನಿಂತಿದ್ದನ್ನು ಮರೆಯಲು ಸಾಧ್ಯವಿಲ್ಲ.
ಈ ಹೋರಾಟದ ಪ್ರಕ್ರಿಯೆಯಲ್ಲಿ, 13 ಹಳ್ಳಿಗಳು ಈಗ ಇಡೀ ರಾಜ್ಯದ, ದೇಶದ ಹಳ್ಳಿಗಳಾಗಿವೆ. ರೈತರು ಉಳಿದಿದ್ದಾರೆ, ರೈತರ ಜೊತೆಗಿದ್ದ ರಾಜ್ಯ ಗೆದ್ದಿದ್ದೆ. ಈ ಹೋರಾಟದ ಬೆನ್ನಿಗೆ ಇಡೀ ರಾಜ್ಯ ನಿಂತಿತು. 13 ಹಳ್ಳಿಗಳ ಜೊತೆಗೆ ರಾಜ್ಯದ ಎಲ್ಲರ ಸಂಬಂಧ ಬೆರೆತಿದೆ.
ಹೋರಾಟದಲ್ಲಿ ಪಾಲ್ಗೊಂಡವರ ಅನುಭವ ಕಥನ ಪುಸ್ತಕ ಲಭ್ಯ.
ಬೆಲೆ 200ರೂ




Reviews
There are no reviews yet.