Description
ಚುಟುಕು ಚಮತ್ಕಾರ
ಶಿವರಾಯ ಅಕ್ಕರಕಿ
“ಚುಟುಕು ಅನ್ನುವುದು ಚಟಕ್ಕಾಗಿ ಬರೆಯುವುದಲ್ಲ. ಹಠಕ್ಕೆ ಬಿದ್ದಾದರೂ ಇರುವುದರಲ್ಲಿ ಸತ್ಯದರ್ಶನ ಮಾಡಿಸುವುದು. “ಚುಟುಕು ಸಾಹಿತ್ಯದ ಔಚಿತ್ಯದ ಕುರಿತಂತೆ ಮಾರ್ಮಿಕವಾಗಿ ಹೇಳುತ್ತಾರೆ. “ಬದುಕಿನ ಚಿತ್ರವಿಚಿತ್ರ ಸರಿಪಡಿಸಿಕೊಳ್ಳದಿರೆ ವಿಕಾರವೇ ಅದರ ಮಿತ್ರ “ಎನ್ನುವಾಗ ಪ್ರಜ್ಞೆಯ ಹೆಜ್ಜೆ ಎಷ್ಟು ಅವಶ್ಯಕ ಎಂದರಿವಾಗುತ್ತದೆ. “ಸತ್ತವರ ಸಾವು ಬರೇ ಸಮಾಧಿಯಾಗಬಾರದು. ಸತ್ತು ಬದುಕಿಸುವ ನೆನಪಿನ ಇತಿಹಾಸ ಕೆತ್ತಿ ನಿಲ್ಲಿಸುವಂತಾಗಬೇಕು “ಎನ್ನುವಾಗ ವಿಭೂತಿ ಪುರುಷರು ಈ ನೆಲದಲ್ಲಿ ಹುಟ್ಟಿ ಬೆಳೆದುಬರುವ ಪೀಳಿಗೆಗೆ ಮಾದರಿ ಇತಿಹಾಸವಾಗಬೇಕೆನ್ನುವ ಭಾವತೀವ್ರತೆ ಇವರ ಹತ್ತು ಹಲವು ಚುಟುಕಿನಲ್ಲಿ ಕುಟುಕುವಂತಿದ್ದರೂ ವಾಸ್ತವದ ಕಟುಸತ್ಯ ಕಣ್ಣೆದುರು ರಾಚುತ್ತದೆ. ಗದ್ಯದಂತೆ ಕಾಣುವ ಹಲವು ಚುಟುಕುಗಳು ಅನುಭವಗಳ ಸಾಂದ್ರತೆಯಲ್ಲಿ ಮುಂದಿನ ದಿನಗಳಲ್ಲಿ ಇನ್ನೂ ಮೂರ್ತರೂಪ ಪಡೆಯುತ್ತವೆ ಎನ್ನುವ ಆಶಾಭಾವನೆ ಗಟ್ಟಿಯಾಗಿದೆ ಎನ್ನಬಹುದು. ಹತ್ತು ಹಳವಂಡಗಳನ್ನು ಸುಪ್ತ ಮನಸ್ಸಿನಲ್ಲಿ ಮೂಡಿಸಿಕೊಂಡು ಸಾಹಿತ್ಯ ದೀಪದೊಂದಿಗಿನ ಬೆಳಕಿನ ಕೈಂಕರ್ಯ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ.




Reviews
There are no reviews yet.