Description
ಜನಪದ ನಾಯಕ ಡಾ.ರಾಜಕುಮಾರ್ ಬರಗೂರು ರಾಮಚಂದ್ರಪ್ಪ
₹160.00
ಪ್ರೊ. ಬರಗೂರು ರಾಮಚಂದ್ರಪ್ಪನವರು ಬಹುಮುಖ ಪ್ರತಿಭೆಯ ಅನನ್ಯ ಸಾಧನೆ. ಸಾಹಿತ್ಯ, ಸಿನಿಮಾ ಮತ್ತು ಜನ ಸಂಸ್ಕೃತಿಯ ಕ್ಷೇತ್ರಗಳಲ್ಲಿ ತಮ್ಮದೇ ವಿಶಿಷ್ಟ ಚಿಂತನೆ ಮತ್ತು ಕ್ರಿಯೆಗಳ ಮೂಲಕ ನಾಡಿನ ಸಾಮಾಜಿಕ ಚಲನಶೀಲತೆಗೆ ಕಾರಣರಾದ ಬರಗೂರರು ಮನುಷ್ಯ ಸಂಬಂಧಗಳ ಗಾಢ ಸೆಳೆತದಿಂದ ಅಪಾರ ಸ್ನೇಹ ವಲಯವನ್ನು ಕಟ್ಟಿಕೊಂಡಿದ್ದಾರೆ. ಸಂವೇದನೆಯ ಸ್ಪರ್ಶದಿಂದ ನಾಡಿನಾದ್ಯಂತ ವೈಚಾರಿಕ ವಲಯವನ್ನು ಕಟ್ಟಿದ್ದಾರೆ. ಬದುಕು ಮತ್ತು ಬರಹಗಳ ನಡುವೆ ಬಿರುಕಿಲ್ಲದ ನಡೆನುಡಿಯಿಂದ ಪ್ರಮಾಣಿಕತೆಯ ರೂಪಕವಾಗಿದ್ದಾರೆ. ತಮ್ಮ ಸೈದ್ಧಾಂತಿಕ ಬದ್ಧತೆ ಶುಷ್ಕವಾಗದಂತೆ ಸಂವಾದನೀಯ ವ್ಯಕ್ತಿತ್ವವನ್ನು ಬೆಳೆಸಿಕೊಂಡಿರುವ ಬರಗೂರರು ಮುಕ್ಕಾಗದೆ ಮಾನವೀಯ ಅಂತಃಕರಣದಿಂದ ವ್ಯಕ್ತಿ ಮತ್ತು ಅಭಿವ್ಯಕ್ತಿ ನೆಲೆಗಳಲ್ಲಿ ಅಚ್ಚಳಿಯದ ಹೆಜ್ಜೆ ಗುರುತು ಮೂಡಿಸಿದ್ದಾರೆ. ಡಾ. ರಾಜ್‌ಕುಮಾರ್ ಅವರ ಜೊತೆ ಆತ್ಮೀಯ ಸಂಬಂಧವಿಟ್ಟುಕೊಂಡಿದ್ದ ಬರಗೂರರು ಕಟ್ಟಿಕೊಟ್ಟಿರುವ ಈ ಕೃತಿಯು ಅವರಿಬ್ಬರ ಸಂಬಂಧದಷ್ಟೇ ಆಪ್ತವಾಗಿ ಮೂಡಿಬಂದಿದೆ. ಡಾ. ರಾಜಕುಮಾರ್ ಅವರ ವ್ಯಕ್ತಿತ್ವ ‘ಮತ್ತು ಸಾಧನೆಗಳನ್ನು ಸಾಧಾರವಾಗಿ ಚಿತ್ರಿಸಿದೆ
Reviews
There are no reviews yet.