ಟ್ರಿಲಿಯನ್ ಡಾಲರ್ ಎಕನಾಮಿಯ ಒಳ ಹೊರಗೆ ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ

80.00

ಟ್ರಿಲಿಯನ್ ಡಾಲರ್ ಎಕನಾಮಿಯ ಒಳ ಹೊರಗೆ ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ

ಭಾರತದ ಸಂವಿಧಾನ ಈ ದೇಶದಲ್ಲಿ ಯಾವುದೇ ಜಾತಿ, ವರ್ಗ, ವರ್ಣ, ಲಿಂಗ ಅಥವಾ ಧರ್ಮಾಧಾರಿತ ತಾರತಮ್ಯಗಳಿಲ್ಲದ ಸಮಾಜವನ್ನು ನಿರ್ಮಿಸುವ ಧೈಯ ಹೊಂದಿದೆ. ಇಂತಹ ಸಮಾಜವನ್ನು ರೂಪಿಸುವ ಜವಾಬ್ದಾರಿಯನ್ನು ಪ್ರಭುತ್ವ ಮತ್ತು ಸಮಾಜದ ಮೇಲೆ ಹೊರಿಸಿದೆ. ಸಮಾನತೆ, ಭ್ರಾತೃತ್ವ ಮತ್ತು ಸ್ವಾತಂತ್ರ್ಯದ ಮೌಲ್ಯಗಳು ಈ ದೇಶದ ಮೌಲಿಕ ಅಡಿಪಾಯವಾಗಿರಬೇಕು. ಈ ಮೌಲ್ಯಗಳು ಸರ್ಕಾರ ಮತ್ತು ಸಮಾಜದ ನಡೆಯಲ್ಲಿ ಮಾರ್ಗದರ್ಶಿ ಸೂತ್ರಗಳಾಗಿಯೂ ಇರಬೇಕೆನ್ನುವುದು ನಮ್ಮ ದೇಶದ ಸಂವಿಧಾನದ ಆಶಯಗಳಾಗಿವೆ. ಈವರೆಗೆ ಶೋಷಣೆ, ದಮನಕ್ಕೊಳಗಾದ ಜನರೇ ಈ ದೇಶದ ಚುಕ್ಕಾಣಿ ಹಿಡಿಯುವಂತೆ ಈ ದೇಶದ ಆರ್ಥಿಕತೆ, ಸಾಮಾಜಿಕ, ರಾಜಕೀಯ, ಶಿಕ್ಷಣ ಮತ್ತು ಸಂಸ್ಕೃತಿಗಳು ರೂಪುಗೊಳ್ಳುವ ದಿಕ್ಕಿನಲ್ಲಿ ಸಮಾಜ ನಡೆಯುವಂತಾಗಬೇಕೆಂಬುದು ಸ್ವಾತಂತ್ರ್ಯ ಹೋರಾಟದ ಆಶಯಗಳು ಹೌದು; ಸಂವಿಧಾನಾತ್ಮಕ ನಿರ್ದೇಶನವೂ ಹೌದು. ಆದರೆ ಸ್ವಾತಂತ್ರ್ಯಗಳಿಸಿಕೊಂಡು 70 ವರ್ಷಗಳಾದ ನಂತರದಲ್ಲಿ ನಮ್ಮ ನಡೆಯನ್ನು ಪುನರಾವಲೋಕಿಸುವುದಾದರೆ ಈ ದೇಶದಲ್ಲಿ ಅಸಮಾನತೆ, ತಾರತಮ್ಯ, ಶೋಷಣೆ ಮತ್ತು ದಮನಗಳು, ಮುಂದುವರಿದಿವೆ. ಹಳೆ ಬಗೆಯ ಶೋಷಣೆ, ತಾರತಮ್ಯಗಳ ತೀವ್ರತೆ ಕಡಿಮೆಯಾಗುತ್ತಿದ್ದರೂ ಹೊಸಬಗೆಯ ತಾರತಮ್ಯ, ಶೋಷಣೆ ಮತ್ತು ದಮನಗಳು ಹೆಚ್ಚುತ್ತಿರುವುದರಿಂದ ಈ ದೇಶದ ತಳಸ್ತರದಲ್ಲಿರುವ ಸಮುದಾಯಗಳ ಬದುಕಿನಲ್ಲಿ ಗುಣಾತ್ಮಕ ಬದಲಾವಣೆಯೇನೂ ಬರುತ್ತಿಲ್ಲ.

80

Reviews

There are no reviews yet.

Be the first to review “ಟ್ರಿಲಿಯನ್ ಡಾಲರ್ ಎಕನಾಮಿಯ ಒಳ ಹೊರಗೆ ಅಭಿವೃದ್ಧಿ ರಾಜಕಾರಣ ಮತ್ತು ಅಸಮಾನತೆ”

Your email address will not be published. Required fields are marked *