ದೋಕ್ಲಾಂ ಕರ್ಮಕಾಂಡ

50.00

2017ರಲ್ಲಿ ಭಾರತ ಮತ್ತು ಚೀನಾ ಸೇನೆಗಳು ಯುದ್ಧ ಸನ್ನದ್ಧರಂತೆ ಮುಖಾಮುಖಿಯಾಗಿ ಆತಂಕ ಸೃಷ್ಟಿಸಿದ್ದ ತಾಣ ದೋಕ್ಲಾಂ. ಭೂತಾನ್, ಚೀನಾ, ಗಡಿ ಸಂಗಮದಲ್ಲಿ ಬರುವ ಈ ಪುಟಾಣಿ ಜಾಗದ ಹಿಂದೆ ಏಷ್ಯಾ ಖಂಡದ ಎರಡು ದೈತ್ಯ ರಾಷ್ಟ್ರಗಳ ಪ್ರತಿಷ್ಠೆಯೇ ಅವಿತುಕೂತಿದೆ. ಐತಿಹಾಸಿಕ ಪುರಾವೆಗಳು, ಚಾರಿತ್ರಿಕ ವಿದ್ಯಮಾನಗಳು, ರಾಜಕೀಯ ಬೀಸು ಹೇಳಿಕೆಗಳ ಆಧಾರಸಹಿತ ಉಲ್ಲೇಖಗಳೊಂದಿಗೆ ಈ ಕೃತಿ ಇಂಡಿಯಾ-ಚೀನಾ ಗಡಿ ವಿವಾದದ ಪಕ್ಷಿನೋಟವನ್ನು ತೆರೆದಿಡುತ್ತದೆ. ಯಾರ ಪರವಾಗೂ ನಿಲ್ಲದೆ ದಾಖಲೆಗಳನ್ನು, ಅಧಿಕೃತ ಗೆಜೆಟಿಯರಿನಲ್ಲಿ ಪ್ರಕಟವಾದ ಭೂಪಟಗಳನ್ನೂ ಮುಂದಿಡುವ ಲೇಖಕರು ಭಾರತ-ಚೀನಾ ನಡುವಿನ ಗಡಿ ವಿವಾದದ ಇತಿಹಾಸವನ್ನು ಪರಿಚಯಿಸಿದ್ದಾರೆ.