ನಿಷೇಧ (ಚುಂಡೂರಿನ ನೆತ್ತರ ಕಥೆ)

395.00

ನಿಷೇಧ (ಚುಂಡೂರಿನ ನೆತ್ತರ ಕಥೆ)
ತೆಲುಗು ಮೂಲ: ನಲ್ಲೂರಿ ರುಕ್ಮಿಣಿ
ಕನ್ನಡಕ್ಕೆ: ನಗರಗೆರೆ ರಮೇಶ್‌

ಕಾದಂಬರಿಯಲ್ಲಿ ಅಕ್ಷರಸ್ಥ ‘ಯುವಕರ ಸಂಘ’ ಅತ್ಯಂತ ಜಾಗರೂಕತೆಯಿಂದ, ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿರುವುದು ಎದ್ದು ಕಾಣುತ್ತದೆ. ಹಟ್ಟಿಯಲ್ಲಿ ಅರಿವು ತುಂಬಲು ಅವರು ಪಟ್ಟಪಾಡು, ಅವರ ಗಟ್ಟಿತನ, ಬೆದರಿಕೆಗಳಿಗೆ ಜಗ್ಗದೆ ಎದುರಿಸಿದ ಸವಾಲುಗಳು, ಪೊಲೀಸ್ ಅಧಿಕಾರಿಗಳು, ವಕೀಲರು, ನ್ಯಾಯಾಲಯಗಳಿಗೆ ಸಂಪರ್ಕ ಸೇತುವೆಯಾದ ರೀತಿ, ಪ್ರತಿ ಹಂತದಲ್ಲೂ ಸಾಕ್ಷಿಗಳಲ್ಲಿ ಆತ್ಮಸ್ಥೈರ್ಯ, ಜಾಗೃತಿ ಮೂಡಿಸುತ್ತಾ ಅವರನ್ನು ಕಣ್‌ರೆಪ್ಪೆಯಂತೆ ಪ್ರಾಣದ ಹಂಗು ತೊರೆದು ಕಾಪಾಡಿದ ರೀತಿ ಓದುಗನನ್ನು ದಂಗುಬಡಿಸುತ್ತದೆ. ಇದರಲ್ಲಿ ಕಾರ್ಯಕರ್ತರಿಗೆ, ಸಂಘಟಕರಿಗೆ, ಚಳವಳಿಕಾರರಿಗೆ ನೂರಾರು ಕಲಿಕೆಯ ಪಾಠಗಳಿವೆ. ನಲ್ಲೂರಿ ರುಕ್ಮಿಣಿಯವರು ಬರೆದ ತೆಲುಗಿನ ‘ನಿಷಿಧ’ ಕಾದಂಬರಿಯನ್ನು, ‘ನಿಷೇಧ’ ಹೆಸರಿನಲ್ಲಿ ಅತ್ಯಂತ ಸರಳವಾಗಿ, ಎಲ್ಲಾ ಕನ್ನಡ ಓದುಗರಿಗೂ ಸುಲಭವಾಗಿ ಅರ್ಥವಾಗುವಂತೆ ನಗರಗೆರೆ ರಮೇಶ್ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

Reviews

There are no reviews yet.

Be the first to review “ನಿಷೇಧ (ಚುಂಡೂರಿನ ನೆತ್ತರ ಕಥೆ)”

Your email address will not be published. Required fields are marked *