ಪಂಡಿತ್ ಜವಾಹರಲಾಲ್ ನೆಹರು ಆದಿವಾಸಿಗಳ ಅಭಿವೃದ್ಧಿ

200.00

ಪಂಡಿತ್ ಜವಾಹರಲಾಲ್ ನೆಹರು ಆದಿವಾಸಿಗಳ ಅಭಿವೃದ್ಧಿ
(ಆದಿವಾಸಿಗಳ ಸಂಸ್ಕೃತಿ ಮತ್ತು ಅಭಿವೃದ್ಧಿ ಕುರಿತು ನೆಹರು ಅವರ
ಬರಹ ಮತ್ತು ಭಾಷಣಗಳ ಅನುವಾದ)

ಬುಡಕಟ್ಟು ಸಮುದಾಯಗಳು ತಮ್ಮ ಅಸ್ತಿತ್ವವನ್ನು ಅಥವಾ ಪರಂಪರೆಯನ್ನು ಕಳೆದುಕೊಳ್ಳದೆ ರಾಷ್ಟ್ರದ ಪ್ರಗತಿಯಲ್ಲಿ ಭಾಗವಹಿಸಲು ಸಮಾನ ಮತ್ತು ನ್ಯಾಯಯುತ ಸಮಾಜವನ್ನು ರಚಿಸಲು ಪ್ರಯತ್ನಿಸಬೇಕು ಎಂಬ ನೆಹರು ಅವರ ಆಶಯವನ್ನು ಈ ಅನುವಾದಿತ ಕೃತಿ ಪರಿಣಾಮಕಾರಿಯಾಗಿ ಬಿಂಬಿಸುತ್ತದೆ. ಈ ಪಠ್ಯವನ್ನು ಓದುವವರಿಗೆ ಬುಡಕಟ್ಟು ಸಮುದಾಯಗಳ ಭೂಮಿಯ ಹಕ್ಕುಗಳನ್ನು ಗುರುತಿಸಲು ಮತ್ತು ರಕ್ಷಿಸಲು ನೆಹರು ಪ್ರಬಲವಾಗಿ ಪ್ರತಿಪಾದಿಸಿದ್ದರು ಎಂಬುದು ಮನವರಿಕೆಯಾಗುತ್ತದೆ. ನೆಹರೂ ಅವರ ರಾಜಕೀಯ ಧುರೀಣತೆಗೆ ಮತ್ತೊಂದು ಸಾಕ್ಷಿ ಎಂದರೆ ಸಾಕಷ್ಟು ಪರಿಹಾರವಿಲ್ಲದೆ ಮತ್ತು ಅವರ ಅನುಮೋದನೆಯಿಲ್ಲದೆ ಬುಡಕಟ್ಟು ಭೂಮಿಯನ್ನು ಅವರಿಂದ ಕಿತ್ತುಕೊಳ್ಳುವ ಅಥವಾ ಅಧಿಕಾರಯುತವಾಗಿ ಕಸಿದುಕೊಳ್ಳುವ ಕೆಲಸ ಮಾಡಬಾರದು ಎಂದು ಅವರು ನಂಬಿದ್ದರು. ಹಾಗೆಯೇ, ಬುಡಕಟ್ಟು ಸಮುದಾಯಗಳು ತಮ್ಮ ಸಂಪನ್ಮೂಲಗಳನ್ನು ನಿರ್ವಹಿಸುವಲ್ಲಿ ಸ್ವಾಯತ್ತತೆಯ ಕಲ್ಪನೆಯನ್ನು ಬೆಂಬಲಿಸಿದರು. ಜವಾಹರಲಾಲ್ ನೆಹರು ಅವರ ಚಿಂತನೆಗಳ ಈ ಅನುವಾದಿತ ಆವೃತ್ತಿಯು ನೆಹರೂ ಅವರ ದೃಷ್ಟಿ, ಮೌಲ್ಯಗಳು ಮತ್ತು ನೀತಿಗಳ ಒಳನೋಟಗಳನ್ನು ಒದಗಿಸುತ್ತದೆ. ಮತ್ತು ಅವುಗಳ ಮಹತ್ವವು ಇಂದಿಗೂ ಪ್ರಸ್ತುತವಾಗಿದೆ ಎಂದು ಸಾಬೀತುಪಡಿಸುತ್ತದೆ. ಈ ಮಹತ್ವದ ಅನುವಾದವು ಕನ್ನಡದ ಚಿಂತನಾ ಪರಂಪರೆಯನ್ನು ಉತ್ತಮಗೊಳಿಸಬಲ್ಲದು. ಇಂತಹ ಅಮೂಲ್ಯವಾದ ಕೆಲಸವನ್ನು ಪೂರೈಸಿರುವ ಪ್ರಭಾಕರ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ.
ಡಾ. ಎಚ್. ಕೆ. ಶಿವಲಿಂಗಸ್ವಾಮಿ
ಪ್ರಾಧ್ಯಾಪಕರು, ಇಂಗ್ಲೀಷ್ ವಿಭಾಗ
ತುಮಕೂರು ವಿಶ್ವವಿದ್ಯಾಲಯ

Description

ಪಂಡಿತ್ ಜವಾಹರಲಾಲ್ ನೆಹರು ಆದಿವಾಸಿಗಳ ಅಭಿವೃದ್ಧಿ
(ಆದಿವಾಸಿಗಳ ಸಂಸ್ಕೃತಿ ಮತ್ತು ಅಭಿವೃದ್ಧಿ ಕುರಿತು ನೆಹರು ಅವರ
ಬರಹ ಮತ್ತು ಭಾಷಣಗಳ ಅನುವಾದ)
ಸಂಪಾದನೆ ಮತ್ತು ಅನುವಾದ
ಡಾ. ಎ. ಎಸ್. ಪ್ರಭಾಕರ

Reviews

There are no reviews yet.

Be the first to review “ಪಂಡಿತ್ ಜವಾಹರಲಾಲ್ ನೆಹರು ಆದಿವಾಸಿಗಳ ಅಭಿವೃದ್ಧಿ”

Your email address will not be published. Required fields are marked *