“ಬೊಗಸೆ ತುಂಬಾ ಕನಸುಗಳು”

200.00

“ಬೊಗಸೆ ತುಂಬಾ ಕನಸುಗಳು”

ಶ್ರೀಮತಿ ಡಾಕ್ಟರ್ ದೀಪ್ತಿ ಪಟ್ನಾಯಕ್‌ರವರ “ಬೊಗಸೆ ತುಂಬಾ ಕನಸುಗಳು” ಕಥಾ ಸಂಕಲನವು ಮಾನವ ಸಂಬಂಧಗಳ ವಿಶೇಷ ಚಿತ್ರಣವನ್ನು ಹೊಂದಿದೆ. ಸ್ವಾತಂತ್ರೋತ್ತರ ಭಾರತದ ತಲ್ಲಣಗಳ ಜೊತೆ ಸಮಕಾಲೀನ (ಈಗಿನ) ತಲ್ಲಣಗಳನ್ನು, ಬದುಕನ್ನು ಶ್ರೀಮತಿ ಪಟ್ನಾಯಕ್ ಅವರು ಚಿಕಿತ್ಸಕ ರೀತಿಯಲ್ಲಿ ಗಮನಿಸಿ, ನಮ್ಮ ಸುತ್ತ ಮುತ್ತಲಿನ ಆಗು ಹೋಗುಗಳಿಗೆ ಓದುಗರು ಕೂಡ ಕಳಕಳಿಯಿಂದ ಸ್ಪಂದಿಸುವಂತೆ ಬರೆದಿದ್ದಾರೆ. ಕೆಲ ಘಟನೆಗಳನ್ನು, ಅನುಭವಗಳನ್ನು ಪಾತ್ರಗಳ ಮುಖೇನ ಗಮನಿಸುತ್ತಾ, ಅರ್ಥೈಸುತ್ತಾ, ಚರ್ಚಿಸುತ್ತಾ, ಕೆಲವು ಕಡೆ ಸೂಕ್ಷ್ಮವಾಗಿ ಕಥೆಯೊಳಗೆ ಕತೆಯನ್ನು ಬೆಳೆಸುತ್ತಾ ವಿಭಿನ್ನವಾಗಿ ದೃಶ್ಯವನ್ನು ತೆರೆದಿಟ್ಟಿದ್ದಾರೆ. ಸಾಮೂಹಿಕ ಸಂಗತಿಗಳ ಕಡೆ ಓದುಗರ ಗಮನ ಹರಿಸುವಲ್ಲ ಯಶಸ್ವಿಯಾಗಿದ್ದಾರೆ. ಕಥೆ ಕಟ್ಟುವಲ್ಲಿ ಎಲ್ಲಿಯೂ ಅವಸರವಿಲ್ಲ. ಸಮಾಧಾನವಾಗಿ ಸಂಬಂಧಗಳನ್ನು ಚಿತ್ರಿಸುವಲ್ಲಿ ಗಮನ ಸೆಳೆಯುತ್ತಾರೆ ಅವರಿಗೆ ನನ್ನ ಅಭಿನಂದನೆ.

ಸರಳವಾಗಿ, ನಿರರ್ಗಳವಾಗಿ ಓದಿಸಿಕೊಂಡು ಹೋಗುವ ಕಥೆಗಳನ್ನು ಓಡಿಯಾ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸಿ ಪರಿಚಯಿಸಿದ ಹಿರಿಯ ಪೊಲೀಸ್ ಅಧಿಕಾರಿ ಪ್ರಣವ ಮೊಹಾಂತಿ ಅವರಿಗೆ ಅಭಿನಂದನೆಯನ್ನು ಸಲ್ಲಿಸಿ ಓಡಿಯಾ ಭಾಷೆಯ ಇನ್ನಷ್ಟು ಕೃತಿಗಳನ್ನು ಭಾಷಾಂತರಿಸಲಿ ಎಂದು ಹಾರೈಸುತ್ತೇನೆ.

Description

“ಬೊಗಸೆ ತುಂಬಾ ಕನಸುಗಳು”
ಶ್ರೀಮತಿ ಡಾಕ್ಟರ್ ದೀಪ್ತಿ ಪಟ್ನಾಯಕ್‌

Reviews

There are no reviews yet.

Be the first to review ““ಬೊಗಸೆ ತುಂಬಾ ಕನಸುಗಳು””

Your email address will not be published. Required fields are marked *