ಮಹಿಳೆ ಆಯ್ಕೆ ಸ್ವಾತಂತ್ರ್ಯ ಸಂಪಾದಕರು ಡಾ. ಕೆ. ಷರೀಫಾ

150.00

ಮಹಿಳೆ ಆಯ್ಕೆ ಸ್ವಾತಂತ್ರ್ಯ ಸಂಪಾದಕರು ಡಾ. ಕೆ. ಷರೀಫಾ

ಡಾ. ಕೆ. ಪರೀಫಾ ಅವರು ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ ಲೇಖಕಿ, ಕವಿಯಾಗಿ, ಚಿಂತಕಿಯಾಗಿ ಅವರು ಸದಾ ಸಾಮಾಜಿಕ ಜೀವ ಚೈತನ್ಯವಾಗಿದ್ದಾರೆ. ಬಂಡಾಯ ಸಾಹಿತ್ಯ ಸಂಘಟನೆಯ ಆರಂಭ ಕಾಲದಿಂದಲೂ ಅದರ ಭಾಗವಾಗಿ ಚಂಚಲಗೊಳ್ಳದ ಬದ್ಧತೆ ತೋರಿದ್ದಾರೆ. ಸರಳ ಮತ್ತು ನೇರ ನಿರೂಪಣೆ ಷರೀಫಾ ಅವರ ಬರಹಗಳ ಲಕ್ಷಣ, ಗಂಭೀರ ವಿಷಯಗಳ ಸಂವಹನಶೀಲತೆ ಇನ್ನೊಂದು ಗುಣ. ಇವರು ಮುಸ್ಲಿಂ ಮಹಿಳೆಯರ ಸಾಹಿತ್ಯದ ವಿಭಿನ್ನ ಆಯಾಮ ಕುರಿತು ಬರೆದ ಬರಹಗಳು ಅನೇಕರಿಗೆ ಅಪರಿಚಿತವಾದ ನೆಲೆಗಳನ್ನು ತೆರೆದಿಟ್ಟಿವೆ. ಈಗ ‘ಮಹಿಳೆ – ಆಯ್ಕೆ ಸ್ವಾತಂತ್ರ’ ಎಂಬ ಕೃತಿಯ ಸಂಪಾದಕರಾಗಿ ಕನ್ನಡ ಓದುಗರಿಗೆ ಒಂದು ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಈ ಕೃತಿಯಲ್ಲಿರುವ ಎಲ್ಲಾ ಬರಹಗಾರರೂ ಉಡುಪಿನ ರಾಜಕಾರಣ’ದ ವಿವಿಧ ಮಗ್ಗಲುಗಳಿಗೆ ಮಾತಾಗಿದ್ದಾರೆ. ಅಧ್ಯಯನಶೀಲತೆ ಮತ್ತು ಚಿಂತನಶೀಲತೆಗಳೊಂದಾದ ಅಪರೂಪದ ಬರಹಗಳು ಈ ಕೃತಿಯಲ್ಲಿವೆ. ಹಿಜಾಬ್ ಬುರ್ಖಾಗಳನ್ನು ಪ್ರಧಾನವಾಗಿ ಒಳಗೊಂಡು ಒಟ್ಟಾರೆ ಮಹಿಳೆಯರ ಉಡುಪು ಮತ್ತು ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಲೇಖನಗಳೂ ಇವೆ. ಈ ಹಿನ್ನಲೆಯಲ್ಲಿ ಇದೊಂದು ವಿಶೇಷ ಚಿಂತನಾಗ್ರಂಥ. ಇದರ ಸಂಪಾದಕರಾದ ಕೆ. ಷರೀಫಾ. ಓದುಗರಿಗೆ ಉಪಯುಕ್ತ ಹಾಗೂ ಕಾಳಜಿಯ ಕೃತಿಯನ್ನು ನೀಡಿದ್ದಾರೆ.

ಬರಗೂರು ರಾಮಚಂದ್ರಪ್ಪ

Reviews

There are no reviews yet.

Be the first to review “ಮಹಿಳೆ ಆಯ್ಕೆ ಸ್ವಾತಂತ್ರ್ಯ ಸಂಪಾದಕರು ಡಾ. ಕೆ. ಷರೀಫಾ”

Your email address will not be published. Required fields are marked *