ಯುದ್ಧಕಾಂಡ

300.00

ಕನ್ನಡದಲ್ಲಿ ಯುದ್ದ ಸಾಹಿತ್ಯ ಎನ್ನುವುದು ಬಹಳ ಕಡಿಮೆ. ನಮ್ಮ ಸ್ವಾತಂತ್ರ್ಯಾನಂತರ ಭಾರತ ಎದುರಿಸಿದ ಐದು ಯುದ್ಧಗಳ ಬಗ್ಗೆ ಕನ್ನಡದಲ್ಲಿ ಏನೂ ಇಲ್ಲವೇ ಇಲ್ಲ ಎನ್ನಬಹುದೇನೊ. ಅದರಲ್ಲೂ ೧೯೬೨ರಲ್ಲಾದ ಭಾರತ ಚೈನಾ ಯುದ್ಧ ಇವತ್ತಿಗೂ ಕನ್ನಡ ಓದುಗನಿಗೆ ಅಜ್ಞಾತವಾಗಿಯೇ ಉಳಿದುಕೊಂಡಿದೆ. ಇಂಗ್ಲಿಷ್‌ನಲ್ಲಿ ಅನೇಕ ಪುಸ್ತಕಗಳು ಬಂದಿವೆಯಾದರು ಕನ್ನಡದಲ್ಲಿ ತುಂಬಾ ಕಮ್ಮಿ. ಬಂದಿದ್ದರೂ ಅವು ಕಥಾನಕವಾಗಿ ತೆರೆದುಕೊಂಡಿವೆಯೇ ವಿನಾಃ ಸೂಕ್ತ ದಾಖಲೆ, ಅಧಿಕೃತ ಉಲ್ಲೇಖಗಳ ಮೂಲಕ ಇತಿಹಾಸವನ್ನು ನಿಖರವಾಗಿ ಕಟ್ಟಿಕೊಡುವಲ್ಲಿ ಪರಿಣಾಮಕಾರಿ ಪ್ರಯತ್ನ ಮಾಡಿಲ್ಲ ಎಂದರು ತಪ್ಪಾಗಲಿಕ್ಕಿಲ್ಲ. ಈ ಕೊರತೆಯನ್ನು ಇತಿಹಾಸ ಸಂಶೋಧಕ ಯಡೂರ ಮಹಾಬಲ ಅವರು ಈ ಕೃತಿಯ ಮೂಲಕ ನೀಗುವ ಪ್ರಯತ್ನ ಮಾಡಿದ್ದಾರೆ. ತಮ್ಮ ಬದುಕಿನ ಬಹುಪಾಲು ಸಮಯವನ್ನು ಭಾರತ ಚೀನಾ ಸಂಬಂಧ, ಈಶಾನ್ಯ ರಾಜ್ಯಗಳ ಅಧ್ಯಯನದಲ್ಲೇ ಕಳೆದಿರುವ ಅವರು ಇಲ್ಲಿ ಅಪರೂಪದ ದಾಖಲೆಗಳ ಮೂಲಕ ಅರವತ್ತು ವರ್ಷಗಳ ಹಿಂದಿನ ಯುದ್ಧದ ರಾಜಕೀಯ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ. ಹಲವು ಐತಿಹಾಸಿಕ ಸಂಗತಿಗಳು ಓದುಗರನ್ನು ಚಕಿತಗೊಳಿಸುತ್ತವೆ.
Category: