ಯುದ್ಧಪೂರ್ವ ಕಾಂಡ
₹400.00
ಸ್ವಾತಂತ್ರ್ಯ ಬಂದು ಆಗಿನ್ನೂ ಹದಿನೈದು ವರ್ಷ ಕಳೆದಿತ್ತಷ್ಟೆ. ದೇಶವಿಭಜನೆಯ ಗಾಯ, ಅದರ ನಂತರದಲ್ಲಿ ಭುಗಿಲೆದ್ದ ಕೋಮುದಳ್ಳುರಿಯ ತಾಪದಿಂದ ಭಾರತ ಆಗಷ್ಟೆ ಸುಧಾರಿಸಿಕೊಳ್ಳುವ ಯತ್ನದಲ್ಲಿತ್ತು. ಅಂತಹ ಸಂದರ್ಭದಲ್ಲಿ ಗಾಯದ ಮೇಲೆ ಬರೆ ಎನ್ನುವಂತೆ ೧೯೬೨ರಲ್ಲಿ ಚೀನಾದ ಜೊತೆ ಭಾರತ ಯುದ್ಧ ನಡೆಸಬೇಕಾಗಿ ಬಂತು. ಆ ಯುದ್ಧದಲ್ಲಿ ಭಾರತಕ್ಕಾದ ಹಿನ್ನಡೆಯ ಕುರಿತು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರನ್ನು ದೂಷಿಸುವುದು ಬಿಟ್ಟರೆ, ಇನ್ನುಳಿದಂತೆ ಆ ಯುದ್ಧ ಯಾಕಾಗಿ ನಡೆಯಿತು? ಉಭಯ ದೇಶಗಳ ನಡುವೆ ರಾಜಕೀಯ ಸಂಕೀರ್ಣತೆಗಳೇನಿದ್ದವು? ಯುದ್ದಕ್ಕು ಮುನ್ನ ಭಾರತ-ಚೀನಾ ನಡುವೆ ಏನೆಲ್ಲ ಮಾತುಕತೆಗಳು ನಡೆದಿದ್ದವು? ಯುದ್ಧದಲ್ಲಿ ಭಾರತೀಯ ವಿರೋಧಪಕ್ಷಗಳ ಪಾತ್ರವೇನಿತ್ತು? ಇಂತಹ ಹಲವು ವಿಚಾರಗಳು ಇಂದಿನ ಪೀಳಿಗೆಗೆ ನಿಗೂಢವಾಗಿಯೇ ಉಳಿದಿವೆ. ಅದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕ ಯಡೂರು ಮಹಾಬಲ ಅವರು ಈ ಕೃತಿಯ ಮೂಲಕ ಮಾಡಿದ್ದಾರೆ. ಗಡಿರೇಖೆ ನಿರ್ಧರಿಸುವ ರಾಜಕೀಯ ವೈಪರೀತ್ಯದಿಂದ ಶುರುವಾಗಿ ಯುದ್ಧ ಸನ್ನಿವೇಶವನ್ನು ನಿಭಾಯಿಸುವಲ್ಲಿ ಎರಡೂ ದೇಶಗಳು ಎಡವಿದವರೆಗೆ ಪ್ರತಿಯೊಂದು ವಿವರವನ್ನೂ ಚಾರಿತ್ರಿಕ ದಾಖಲೆಗಳ ಮೂಲಕ ಇಲ್ಲಿ ಲೇಖಕರು ಬಿಚ್ಚಿಟ್ಟಿದ್ದಾರೆ.