ಲೋಹಿಯಾ ವಿಚಾರಗಳ ಒಂದು ವಿಮರ್ಶೆ

200.00

ಲೋಹಿಯಾ ಅವರ ಸಮಾಜವಾದದ ಅಗತ್ಯತೆಯನ್ನು ಒಪ್ಪಿಕೊಳ್ಳುತ್ತಲೇ ಜಾತಿ ಮತ್ತು ವರ್ಗಗಳ ಸ್ವರೂಪ ಹಾಗೂ ಚಲನೆಗಳನ್ನು ಲೋಹಿಯಾ ಪರಿಗ್ರಹಿಸಿರುವ ರೀತಿ ಏಕೆ ಸರಿಯಾದ ಕ್ರಮವಲ್ಲ ಎಂಬುದನ್ನು ಈ ಕೃತಿ ಸವಿಸ್ತಾರವಾಗಿ ಚರ್ಚಿಸುತ್ತದೆ. `ವರ್ಗ ಎಂದರೆ ಚಲನಸಾಮರ್ಥ್ಯವುಳ್ಳ ಜಾತಿ’ ಎನ್ನುವ ಲೋಹಿಯಾ ಅವರ ಗ್ರಹಿಕೆಯನ್ನು ವೈಜ್ಞಾನಿಕ ನಿಷ್ಕರ್ಷೆಗೆ ಒಡ್ಡಿದಾಗ ಹೇಗೆ ಸತ್ಯಕ್ಕೆ ಪೂರಕವಾಗುವುದಿಲ್ಲ ಎಂಬುದನ್ನು ತಮ್ಮದೇ ತರ್ಕದೊಂದಿಗೆ ವಿವರಿಸುವ ಲೇಖಕ ಯಡೂರು ಮಹಾಬಲ ಅವರು ಅರ್ಥಶಾಸ್ತ್ರದ ಕುರಿತಾಗಿ ಲೋಹಿಯಾ ತಳೆದಿರುವ ನಿಲುವುಗಳನ್ನು ಈ ಕೃತಿಯಲ್ಲಿ ವಿಮರ್ಶೆಗೆ ಒಳಪಡಿಸಿದ್ದಾರೆ.