Description
ಶಾಲೆಯಲ್ಲಿ ಸಂವಿಧಾನ
₹160.00
ಶಾಲೆಯಲ್ಲಿ ಸಂವಿಧಾನ ಪ್ರೊ. ಎಂ. ಅಬ್ದುಲ್ ರೆಹಮಾನ್ ಪಾಷ
ನಮ್ಮ ಶಾಲೆಗಳು ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ಕಟ್ಟಿಕೊಳ್ಳಬೇಕಾದ ಮಾನವೀಯತೆ, ಸಾಮರಸ್ಯ, ಸಮಾನತೆ, ಸಹೋದರಿ(ರ)ತ್ವ, ಸಹಬಾಳ್ವೆ ಇತ್ಯಾದಿಗಳನ್ನು ಒಂದು ಧಾರ್ಮಿಕ ನೆಲೆಯಿಂದ ಹುಟ್ಟಿಕೊಂಡ ಧ್ಯಾನ, ಯೋಗ, ಸೂರ್ಯ ನಮಸ್ಕಾರ, ಧಾರ್ಮಿಕ ಪಠಣ ಇತ್ಯಾದಿಗಳ ಮೂಲಕ ಕಟ್ಟಿಕೊಳ್ಳಬಹುದು ಎಂಬ ಮೌಡ್ಯವನ್ನು ನಮ್ಮ ಶಾಲೆಗಳು ಪ್ರಾರಂಭಿಕ ಬೆಳವಣಿಗೆ ಹಂತದಲ್ಲಿಯೇ ಮಕ್ಕಳಲ್ಲಿ ಬಿತ್ತಿ-ಬೆಳೆಸಲು ನೋಡುತ್ತವೆ. ವೈಯಕ್ತಿಕವಾಗಿ ನಮ್ಮ ಜಾತಿ, ಧರ್ಮ, ಪಂಥ, ಆಚರಣೆ, ನಂಬಿಕೆ, ಶ್ರದ್ಧೆ ಇತ್ಯಾದಿಗಳು ಏನೇ ಆಗಿದ್ದರು ಭಾರತದ ನಾಗರಿಕರಾದ ನಮಗೆ ಸಂವಿಧಾನವೇ ನಮ್ಮ ‘ಧರ್ಮಗ್ರಂಥ’ ಎನ್ನಬಹುದು. ಸಂವಿಧಾನದ ಆಶಯಗಳನ್ನು ಸಾಕಾರಗೊಳಿಸುವ ಜ್ಞಾನ, ತಿಳುವಳಿಕೆ, ಅದರ ಕುರಿತು ಬದ್ಧತೆ, ಆಚರಣಾ ಕೌಶಲಗಳನ್ನು ಕಟ್ಟಿಕೊಡುವುದೇ ಶಿಕ್ಷಣದ ಮೂಲ ಉದ್ದೇಶ… ಈ ಎಲ್ಲಾ ಅಂಶಗಳನ್ನು, ಲೇಖಕರು ಸೂಕ್ತ ಉದಾಹರಣೆ ಹಾಗೂ ವಿವರಣೆಯ ಮೂಲಕ ಅತ್ಯಂತ ಸರಳ ಹಾಗೂ ಸುಲಭವಾಗಿ ಅರ್ಥವಾಗುವಂತೆ “ಶಾಲೆಗಳಲ್ಲಿ ಸಂವಿಧಾನ” ಎಂಬ ಈ ಪುಸ್ತಕದಲ್ಲಿ ನಿರೂಪಿಸಿದ್ದಾರೆ. ಇದು ಪುಸ್ತಕ ಎನ್ನುವುದಕ್ಕಿಂತ ಶಿಕ್ಷಕರ ಸಂಕ್ಷಿಪ್ತ ಸಂವಿಧಾನ ಕೈದೀವಿಗೆ ಎಂದರೆ ತಪ್ಪಾಗಲಾರದು.
Reviews
There are no reviews yet.