ಪ್ರೀತಿ ಮತ್ತು ಕ್ರಾಂತಿ – ಫೈಜ್ ಅಹಮದ್ ಫೈಜ್ ಅವರ ನೂರೆಂಟು ಕವನಗಳು

125.00

ಫೈಜ್ ಅಹಮದ್ ಫೈಜ್ ಅವರು ವಿಶ್ವಕವಿ. ಜನರ ಕವಿ. ಚಾರಿತ್ರಿಕ ಕಾರಣಗಳಿಂದಾಗಿ ಅವರು ಪಾಕಿಸ್ತಾನದ ಉರ್ದು ಕವಿಯಾಗಿ ಖ್ಯಾತರಾದರೂ ಅವರು ಅವಿಭಜಿತ ಭಾರತದ ಮತ್ತು ದಮನಿತ ಜಗತ್ತಿನ ಸಾಂಸ್ಕೃತಿಕ ರಾಯಭಾರಿಯಂತಿದ್ದರು. ಫೈಜ್ ಅವರ ಕಾವ್ಯವಾಗಲಿ, ಬದುಕಾಗಲಿ ಕನ್ನಡಕ್ಕೆ ಅಷ್ಟು ಪರಿಚಿತವಲ್ಲದ ಸಂದರ್ಭದಲ್ಲಿ ಮತ್ತು ಫೈಜ್ ರಂತಹ ಮಹಾನ್ ಜನಕವಿಯನ್ನು ಭಾಚೆಗೆ ಮತ್ತು ಧರ್ಮಕ್ಕೆ ಸೀಮಿತಗೊಳಿಸಿಬಿಡುವ ಅಪಾಯದ ಕಾಲಘಟ್ಟದಲ್ಲಿ ಕವಯಿತ್ರಿ ಬಾಗೇಶ್ರೀಯವರು ಫೈಜ್ ಅವರ ನೂರಾರು ಕಾವ್ಯಗಳನ್ನು ಕನ್ನಡಕ್ಕೆ ಕರೆತಂದ ಅದ್ಭುತ `ಕವನ ಸಂಕಲನ’ವಿದು.

ಮಂದಿ ನನ್ನ ಶಾಯಿ-ಲೇಖನಿ ಕಿತ್ತುಕೊಂಡರೆ ಚಿಂತೆ ಇಲ್ಲ

ಬೆರಳನ್ನೇ ಅದ್ದಿದ್ದೇನೆ ಗುಂಡಿಗೆಯ ಬಿಸಿ ರಕ್ತದಲ್ಲಿ

ನಾಲಿಗೆಗೆ ಸಂಕೋಲೆ ಹಾಕಿದರೆ ಚಿಂತೆ ಏನೇನೂ ಇಲ್ಲ

ಸರಪಳಿಯ ಪ್ರತಿ ಉಂಗುರಕ್ಕೂ ಕಲಿಸಿದ್ದೇನೆ ನನ್ನ ಮಾತು

- ಫೈಜ್ ಅಹಮದ್ ಫೈಜ್