ಯುದ್ಧೋತ್ತರ ಕಾಂಡ

300.00

1962ರ ಯುದ್ಧದ ನಂತರದ ಭಾರತ ಚೀನಾ ಚೀನಾ ಸಂಬಂಧದ ಕುರಿತು ಚಿತ್ರಣವಿರುವ ಕೃತಿ ‘ಯುದ್ದೋತ್ತರ ಕಾಂಡ’. 1962 ಅಕ್ಟೋಬರ್‌ 20ರಂದು ಪ್ರಾರಂಭವಾದ ಯುದ್ಧದಲ್ಲಿ ಪಶ್ವಿಮ ಕ್ಷೇತ್ರದಲ್ಲಿ ಚೀನಾದ ಕೇಳಿಕೆಯ ರೇಖೆಯಿಂದ ಭಾರತೀಯ ಸೈನಿಕರನ್ನು ಹೊರಹಾಕಲಾಯಿತು. ಪೂರ್ವಕ್ಷೇತ್ರದಲ್ಲಿ ಭಾರತೀಯ ಸೈನ್ಯವನ್ನು ಸೋಲಿಸಿ ಇಡೀ ನೇಫಾ (NEFA) ಪ್ರದೇಶವನ್ನು (ಈಗಿನ ಅರುಣಾಚಲ ಪ್ರದೇಶ) ಚೀನ ಗೆದದಿತು. ಆದರೆ ಏಕ ಪಕ್ಷೀಯವಾಗಿ ಕದನ ವಿರಾಮವನ್ನು ಘೋಷಿಸಿ, ಗೆದ್ದ 90,000 ಚದುರ ಕಿ.ಮೀ ಇಡೀ ನೇಫಾ ಪ್ರದೇಶವನ್ನು ಭಾರತಕ್ಕೆ ಬಿಟ್ಟುಕೊಟ್ಟು ಹಿಂದೆ ಸರಿಯಿತು. ಎರಡು ದೇಶಗಳ ನಡುವೆ ನವೆಂಬರ್‌ 11, 1959ರಂದಿದ್ದ ನಿಜ ನಿಯಂತ್ರಣ ರೇಖೆ ಎನ್ನುವುದು ಜಾರಿಗೆ ಬಂದಿತು. ಭಾರತ-ಚೀನಾ ಸಂಬಂಧ ಹಾಳಾಗಿ ಹೋಯಿತು. 1976ರಿಮದ ಪುನಃ ರಾಯಭಾರ ಸಂಬಂಧಗಳು ಸ್ಥಾಪನೆಗೊಂಡು ಗಡಿ ವಿಷಯ ಸೇರಿದಂತೆ ಮಾತುಕತೆ ನಡೆದು ಹತ್ತು ಐತಿಹಾಸಿಕ ಒಪ್ಪಂದಗಳೂ ಆಗಿವೆ. ಆದರೆ ಗಡಿ ವಿಷಯದಲ್ಲಿ ಸರಿಯಾದ ನಿರ್ಣಯಕ್ಕೆ ಬಂದಿಲ್ಲ.ಪ್ರಸ್ತುತ ಕೃತಿಯು ಯುದ್ಧದ ನಂತರ ಎರಡೂ ದೇಶಗಳ ನಡುವಿನ ಸಂಬಂಧಗಳ ಕುರಿತು ವಿವರಿಸುತ್ತದೆ.

Category:

Reviews

There are no reviews yet.

Be the first to review “ಯುದ್ಧೋತ್ತರ ಕಾಂಡ”

Your email address will not be published. Required fields are marked *