Description
‘ಸಂಕ್ರಾಂತಿ’ ನಾಟಕ
1971ರಲ್ಲಿ ಬರೆದ ನಾಟಕ ‘ಸಂಕ್ರಾಂತಿ’ ಈಗ ಆರನೆ ಮುದ್ರಣ ಕಾಣುತ್ತಿದೆ. ಸಾಪೋ ಕ್ಲಿಸ್ ಕವಿಯ ‘ದೊರೆ ಈಡಿಪಸ್’ (ಅನುವಾದ) ಮತ್ತು ‘ಸಂಕ್ರಾಂತಿ’ 1971ರ ಚಳಿಗಾಲದಲ್ಲಿ, ಮೂರೇ ತಿಂಗಳಲ್ಲಿ ರೂಪು ಗೊಂಡವು. ಹಾಗೆಯೇ 1972ರ ಫೆಬ್ರವರಿಯಲ್ಲಿ ಎರಡೂ ರಂಗದ ಮೇಲೆ ಬಂದವು. ಅದೊಂದು ಹುಚ್ಚು ಹುಮ್ಮಸ್ಸಿನ, ತೀವ್ರ ಕಾವು ಮತ್ತು ಕಾಮನೆಯ ಕಾಲ. ಆ ಕಾಲದ ನನ್ನ ಮನಃಸ್ಥಿತಿಯನ್ನು ‘ಸಂಕ್ರಾಂತಿ’ ವ್ಯಕ್ತ ಪಡಿಸುತ್ತದೆ ಎಂದು ತಿಳಿದಿದ್ದೇನೆ.
‘ಸಂಕ್ರಾಂತಿ’ ಎಂದೂ ಇಷ್ಟು ಅಂದವಾಗಿ ಅಚ್ಚಾಗಿರಲಿಲ್ಲ. ಈ ಸಲ ವಿಶೇಷ ಎಚ್ಚರ, ಪ್ರೀತಿಯಿಂದ ರೂಪಿಸಿದ್ದೇವೆ.





Reviews
There are no reviews yet.